ನಿಮ್ಮ ಅಡುಗೆಕೋಣೆಯನ್ನು ಜಿರಲೆ-ಮುಕ್ತವಾಗಿಡಲು ಸರಳ ಮಾರ್ಗಗಳು
ನಿಮ್ಮ ಅಡುಗೆಕೋಣೆಯ ನೆಲದ ಎಲ್ಲೆಡೆ ಜಿರಲೆಗಳು ಓಡಾಡಿಕೊಂಡಿರುವುದನ್ನು ನೋಡುವುದಕ್ಕಿಂತ ಕೆಟ್ಟ ಸಂಗತಿ ಬೇರಾವುದೂ ಇಲ್ಲ. ಜಿರಳೆಗಳು ಕೀಟಗಳಲ್ಲೇ ಅತ್ಯಂತ ಪ್ರಸರಣಕಾರಿಗಳಾಗಿದ್ದರೂ ನಿಮ್ಮ ಅಡುಗೆಕೋಣೆಯನ್ನು ಜಿರಲೆ-ಮುಕ್ತಗೊಳಿಸಲು ನೀವು ಕೇವಲ ಕೆಲವು ಸರಳ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನೀವು ಅದನ್ನು ಖಚಿತಪಡಿಸಿಕೊಳ್ಳುವ ಕೆಲವು ವಿಧಾನಗಳು ಇಲ್ಲಿವೆ
ಜಿರಳೆಗಳು ಕತ್ತಲ ಮೂಲೆಗಳಲ್ಲಿ ಬೆಳೆಯುತ್ತವೆ. ನೆಲದಲ್ಲಿ ಬಿರುಕುಗಳು, ಮತ್ತು ನಿಮ್ಮ ಅಡುಗೆಮನೆಯ ಸುತ್ತಲೂ ಮೂಲೆಗಳು ಮತ್ತು ಸಂದುಗಳಿವೆಯೇ ಎಂದು ಪರೀಕ್ಷಿಸಿ. ಇವು ಅಡಗಿಕೊಳ್ಳಲು ಅವುಗಳ ನೆಚ್ಚಿನ ಸ್ಥಳಗಳಾಗಿವೆ. ಅಡುಗೆಕೊಣೆಯ ಮೇಲ್ಮೈಗಳ ಸಂಪೂರ್ಣ ತಪಾಸಣೆ ಮಾಡಿ ಮತ್ತು ಯಾವುದೇ ಬಿರುಕುಗಳು ಮತ್ತು ಒಡಕುಗಳು ಕಂಡಾಕ್ಷಣ ಅವುಗಳನ್ನು ತಕ್ಷಣ ಮುಚ್ಚಿ.
ಕಸದ ರಾಶಿಯಂತೆ ಜಿರಳೆಗೆ ಇಷ್ಟವಾದುದು ಯಾವುದೂ ಇಲ್ಲ. ನಿಮ್ಮ ಕಳಪೆ ಬಿನ್ ನಿಮ್ಮ ಕಬೋರ್ಡ್ ಅಡಿಯಲ್ಲಿ ಮರೆಯಾಗಿದ್ದರೂ ಅದು, ಎಲ್ಲಾ ಸಮಯದಲ್ಲೂ ಮುಚ್ಚಿರಬೇಕಾದುದು ಅಗತ್ಯ. ಇದು ಡ್ರೈನ್ ಹತ್ತಿರ ಅಥವಾ ಯಾವುದೇ ರೀತಿಯ ಕೊಳವೆಗಳ ಸಮೀಪದಲ್ಲಿದ್ದರೆ ಇದು ವಿಶೇಷವಾಗಿ ಅವಶ್ಯಕವಾಗಿದೆ.
ತಿಂದ ನಂತರ ನಿಮ್ಮ ಪಾತ್ರೆಗಳನ್ನು ತೊಳೆಯುವುದು ಉತ್ತಮ, ಹೀಗೆ ತೊಳೆಯದೇ ಹೋದರೆ, ರಾತ್ರಿಯಲ್ಲಿ ಸಿಂಕ್ ನಲ್ಲಿ ಕೊಳಕು ಆಹಾರ ಹಾಗೇ ಉಳಿಯುವ ಬಗ್ಗೆ ಎಚ್ಚರವಿರಲಿ. ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಇಟ್ಟುಕೊಳ್ಳಿ ಮತ್ತು ಮಲಗುವ ಮುನ್ನ ಸಿಂಕ್ ಖಾಲಿಯಾಗಿದ್ದು ಅಡುಗೆಕೋಣೆ ಸ್ವಚ್ಛವಾಗಿರಲಿ.
ಅತಿಥಿಗಳು, ಸಾಕುಪ್ರಾಣಿಗಳು, ಮಕ್ಕಳು, ಮತ್ತು ನಮ್ಮ ಇತರ ಕುಟುಂಬದ ಸದಸ್ಯರು ಕೂಡ ನಿಮ್ಮ ಮನೆಯೊಳಗೆ ಧೂಳು, ಕೊಳೆ ಮತ್ತು ಇತರ ಕೊಳಕುಗಳನ್ನು ನಿಮ್ಮ ಮನೆಯೊಳಗೆ ಮತ್ತು ನಿಮ್ಮ ಅಡುಗೆ ಕೋಣೆಗೆ ತರಬಹುದು. ಇದು ಪ್ರತಿಯಾಗಿ ಜಿರಳೆಗಳನ್ನು ಆಕರ್ಷಿಸಬಹುದು. ಇದರಿಂದಾಗಿ ನಿಮ್ಮ ಅಡುಗೆಕೋಣೆಯನ್ನು ಪ್ರತಿದಿನವೂ ಶುಚಿಗೊಳಿಸುವುದು ಮತ್ತು ಸೋಂಕುರಹಿತಗೊಳಿಸುವುದು ಮತ್ತು ಜಿರಳೆಗಳು ಬೆಳೆಯದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
ತಿಂಗಳಿಗೊಮ್ಮೆ ಅಡಿಗೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಲಾಲ್ ಹಿಟ್ ಬಳಸಿ. ಅದರ ಆಳವಾಗಿ ತಲುಪಬಲ್ಲ ಮೂತಿಯ ಮೂಲಕ ಅಡಗಿರುವ ಜಿರಳೆಗಳನ್ನು ಕೊಲ್ಲುತ್ತದೆ.
ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!