ಮಲೇರಿಯಾ ಮತ್ತು ಡೆಂಗಿ ನಡುವಿನ ಸಾಮಾನ್ಯ ರೋಗಲಕ್ಷಣಗಳು
ಇತ್ತೀಚಿನ ದಿನಗಳಲ್ಲಿ ಅನೇಕ ಜನರು ವಿಶೇಷವಾಗಿ ಉತ್ತರ ಭಾರತದವರು ಮಲೇರಿಯಾ ಅಥವಾ ಡೆಂಗಿದಿಂದ ಬಳಲುತ್ತಿದ್ದಾರೆ. ಅವು ತೀವ್ರ, ದೀರ್ಘಕಾಲೀನ ಮತ್ತು ಸಾಂಕ್ರಾಮಿಕ ರೋಗಗಳಾಗಿದ್ದು ವ್ಯಕ್ತಿಯ ಸಾವಿಗೆ ಕೂಡಾ ಕಾರಣವಾಗುತ್ತವೆ.
ಒಂದು ಸಾಮಾನ್ಯ ವಿದ್ಯಮಾನವೆಂದರೆ ಆ್ಯಂಡಸ್ ಎಂಬ ಹೆಣ್ಣು ಸೊಳ್ಳೆಯ ಕಡಿತದಿಂದ ಮಾನವರಲ್ಲಿ ವೈರಾಣು ಸೋಂಕು ಉಂಟಾಗಿ ಡೆಂಗಿ ಉಂಟಾಗುತ್ತದೆ ಆದರೆ ಮಲೇರಿಯಾವು ಪರಾವಲಂಬಿ ಪ್ಲಾಸ್ಮೋಡಿಯಮ್‌ನಿಂದ ಉಂಟಾಗುತ್ತದೆ ಮತ್ತು ಮಾನವರು ಮತ್ತು ಪ್ರಾಣಿಗಳಿಬ್ಬರ ಮೇಲೂ ಪರಿಣಾಮ ಬೀರುತ್ತದೆ.
ಕೆಂಪು ರಕ್ತ ಕಣಗಳ ಮೇಲೆ ಅಥವಾ ಆರ್‌ಬಿಸಿಯ ಮೇಲೆ ನೇರವಾಗಿ ಪರಿಣಾಮ ಬೀರುವ ಮಲೇರಿಯಾವು (ಒಂದು ಸಾಂಕ್ರಾಮಿಕ ರೋಗ) ಈಗಾಗಲೇ ಸೋಂಕಿತರಾಗಿರುವ ವ್ಯಕ್ತಿ ಅಥವಾ ಪ್ರಾಣಿಯನ್ನು ಅನಾಫಿಲಿಸ್ ಸೊಳ್ಳೆಯು ಕಚ್ಚುವುದರಿಂದ ಹರಡುತ್ತದೆ. ಇನ್ನೊಂದೆಡೆ ಡೆಂಗಿ ಸಾಂಕ್ರಾಮಿಕ ರೋಗವಲ್ಲ, ಆದರೆ ಇದು ಆರ್‌ಬಿಸಿ ಮತ್ತು ಪ್ಲೇಟ್ಲೆಟ್ ಗಳ ಮೇಲೆ ಪರಿಣಾಮ ಬೀರುತ್ತದೆ. ಒಮ್ಮೆ ವ್ಯಕ್ತಿಯು ಡೆಂಗಿ ಸೋಂಕಿಗೆ ಒಳಗಾದರೆ ಅವರು ಸಾಮಾನ್ಯವಾಗಿ ಬೀಳಲು ಪ್ರಾರಂಭಿಸುತ್ತಾರೆ. ಡೆಂಗಿ ಸೊಳ್ಳೆಯು ಹಗಲಿನ ವೇಳೆಯಲ್ಲಿ ವ್ಯಕ್ತಿಗೆ ಕಚ್ಚುತ್ತದೆ ಮತ್ತು ಯಾವುದೇ ಸೂಕ್ತ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಕಾಣಿಸಿಕೊಳ್ಳುವುದಕ್ಕಿಂತ 4 ರಿಂದ 13 ದಿನ ಮೊದಲೇ ಇದರ ಅಡ್ಡಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
ಮಲೇರಿಯಾ ಮತ್ತು ಡೆಂಗಿ ಕೆಲವು ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿವೆ. ಅವೆರಡೂ ಇವುಗಳೊಂದಿಗೆ ಆರಂಭವಾಗುತ್ತವೆ
ತಲೆನೋವು
ಸಾಮಾನ್ಯವಾದ ದೌರ್ಬಲ್ಯ
ತೀವ್ರ ಸ್ನಾಯು ನೋವು
ಕೆಳ ಬೆನ್ನು ನೋವು
ನಿಧಾನವಾಗಿ ಮತ್ತು ಸ್ಥಿರವಾಗಿ ಈ ಪರಿಣಾಮಗಳನ್ನು ಉಂಟುಮಾಡುತ್ತವೆ
ಜ್ವರದಂತಹ ಅನಾರೋಗ್ಯ
ಶೀತ
ವಾಕರಿಕೆ
ವಾಂತಿ
ಕೆಮ್ಮು
ಬೇಧಿ
ಬ್ರೇಕ್ ಬೋನ್ ಫೀವರ್ ಎಂದು ಕರೆಯಲ್ಪಡುವ ಡೆಂಗಿ ಜ್ವರ ಸೌಮ್ಯದಿಂದ ತೀವ್ರತೆಗೆ ಬದಲಾಗಬಹುದು. ಹೆಚ್ಚು ತೀವ್ರ ಸ್ವರೂಪಗಳು ಡೆಂಗಿ ಶಾಕ್ ಸಿಂಡ್ರೋಮ್ ಮತ್ತು ಡೆಂಗಿ ಹೆಮೊರೇಜಿಕ್ ಫೀವರ್ ಅನ್ನು (ಡಿಎಚ್‌ಎಫ್) ಒಳಗೊಂಡಿರುತ್ತವೆ. ಡೆಂಗಿ ಜ್ವರದ ಗಂಭೀರ ಸ್ವರೂಪಗಳನ್ನು ಹೊಂದಿರುವ ರೋಗಿಗಳನ್ನು ಸಾಮಾನ್ಯವಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತದೆ.
ಆರಂಭದಲ್ಲಿಯೇ ಪತ್ತೆಹಚ್ಚಿದಲ್ಲಿ ಮಲೇರಿಯಾವನ್ನು ನಿಯಂತ್ರಿಸಬಹುದು ಮತ್ತು ಚಿಕಿತ್ಸೆ ನೀಡಬಹುದು. "ಕೆಟ್ಟ ಗಾಳಿ" ಎಂಬುದಕ್ಕಿರುವ ಇಟಾಲಿಯನ್ ಪದದಿಂದ ಇದು ಹುಟ್ಟಿಕೊಂಡಿದೆ. ಸ್ವಾಂಪ್ ಫ್ಯೂಮ್ಸ್ ನಿಂದ ಈ ರೋಗ ಬರುತ್ತದೆ ಎಂದು ಮೂಲತಃ ರೋಮ್‌ನಲ್ಲಿ ಭಾವಿಸಲಾಗಿತ್ತು. ಏಕೆಂದರೆ ಅಲ್ಲಿ ಕಸದಿಂದ ಮಲೇರಿಯಾ ಹಬ್ಬುವುದು ಸಾಮಾನ್ಯವಾಗಿತ್ತು. ಮಲೇರಿಯಾವು 7 ದಿನಗಳ ಬೆಳವಣಿಗೆಯ ಅವಧಿಯನ್ನು ಹೊಂದಿದೆ ಮತ್ತು ಡೆಂಗಿಗೆ ಇದು ಬದಲಾಗುತ್ತದೆ.
ಎರಡೂ ರೋಗಗಳೂ ಸಾವನ್ನು ಉಂಟುಮಾಡಬಹುದು ಮತ್ತು ತೀವ್ರ ಮಾರಕವಾಗಬಹುದು. ಅವು ಸೊಳ್ಳೆ ಕಡಿತದಿಂದ ಆರಂಭವಾಗುತ್ತವೆ ಮತ್ತು ವ್ಯಕ್ತಿಯ ಸಾವಿನೊಂದಿಗೆ ಕೊನೆಗೊಳ್ಳುತ್ತವೆ. ನಿಮಗೆ ಎಲ್ಲಿಯಾದರೂ ಕಚ್ಚಿದ ಸೊಳ್ಳೆಯಿಂದ ತೀವ್ರ ತೊಂದರೆಗಳು ಉಂಟಾಗಬಹುದು.
ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!