ಹಿಟ್ ಬಗ್ಗೆ
ಕಿಲ್ ಪೆಸ್ಟ್ಸ್, ಕಿಲ್ ಡಿಸೀಸಸ್ ಎಂಬ ಘೋಷವಾಕ್ಯದೊಂದಿಗೆ ಹಿಟ್ 1991 ರಲ್ಲಿ ಆರಂಭಿಸಿದಾಗಿನಿಂದಲೂ ಕೀಟಗಳನ್ನು ಕೊಲ್ಲಲು ಮತ್ತು ಪ್ರತಿ ಮನೆಯನ್ನು ರೋಗಮುಕ್ತವನ್ನಾಗಿಸಲು ಒಬ್ಬ ಯೋಧನಂತೆ ಕೆಲಸ ಮಾಡುತ್ತಿದೆ. ಹಿಟ್ ಉತ್ಪನ್ನಗಳು ಸುಲಭವಾದ ಮಾರ್ಗಗಳಿಂದ ನಿಮ್ಮ ಮನೆಯ ಮೇಲೆ ದಾಳಿ ಮಾಡುವ ಎಲ್ಲ ವಿಭಿನ್ನವಾದ ಕೀಟಗಳ ವಿರುದ್ಧ ನೀವು ಹೋರಾಡುವುದನ್ನು ಖಚಿತಪಡಿಸುತ್ತದೆ.
ಗೋಚರ ಮತ್ತು ಅಗೋಚರ ಎಂಬ ಎರಡು ರೀತಿಯ ಕೀಟಗಳಿರಬಹುದು. ಅಗೋಚರ ರೀತಿಯ ಕೀಟಗಳು ಸಾಮಾನ್ಯವಾಗಿ ತೊಂದರೆಯುಂಟುಮಾಡಬಹುದು, ಹಿಟ್ ಉತ್ಪನ್ನಗಳ ವಿಕಾಸದಿಂದಾಗಿ ಎಲ್ಲಾ ರೀತಿಯ ಕೀಟಾಣುಗಳನ್ನೂ ನಿರ್ಮೂಲನಗೊಳಿಸಬಹುದು. ಹಿಟ್ ಬ್ರ್ಯಾಂಡ್ ನ ಮುಖ್ಯ ಧ್ಯೇಯವೆಂದರೆ ಕೀಟಗಳಿಂದ ಉಂಟಾಗುವ ಆತಂಕವನ್ನು ತೊಡೆದು ಹಾಕುವುದು.
ಹಿಟ್ ಉತ್ಪನ್ನಗಳು ನಿರಂತರವಾಗಿ ವಿಕಾಸ ಹೊಂದುತ್ತಿದ್ದು ಕೀಟಗಳ ವಿರುದ್ಧ ಹೋರಾಡಲು ಮತ್ತು ನಿಮ್ಮನ್ನು ಆರೋಗ್ಯಕರವಾಗಿರಿಸಲು ಸುಧಾರಣೆಗೊಳ್ಳುತ್ತವೆ. ಹಿಟ್ ಬ್ರ್ಯಾಂಡ್ ಭರವಸೆಯನ್ನು ಉಳಿಸಿಕೊಂಡಿರುವುದರಿಂದ ಗ್ರಾಹಕರು ಅದನ್ನು ನಂಬುತ್ತಾರೆ.