ಎಲ್ಲಾ ಲೇಖನಗಳಿಗೆ ಹೋಗಿ ನಿಮ್ಮ ವಾಸದ ಕೊಠಡಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ

ನಿಮ್ಮ ವಾಸದ ಕೊಠಡಿಯನ್ನು ಸರಿಯಾಗಿ ಸ್ವಚ್ಛಗೊಳಿಸುವುದು ಹೇಗೆ

ನೀವು ನಿಮ್ಮ ಇಡೀ ದಿನದ ಕೆಲಸದ ನಂತರ ಮನೆಗೆ ಬರುತ್ತೀರಿ ಮತ್ತು ನಿಮ್ಮ ದಣಿದ ಕಣ್ಣುಗಳು ಸ್ವಿಚ್ ಬೋರ್ಡ್ ಕಡೆ ಹರಿಯುತ್ತವೆ. ಸ್ವಿಚ್ ಬೋರ್ಡ್ ಮೇಲೆ ಕೊಳೆ ಕೂತಿರುವುದು ಕಾಣುತ್ತದೆ, ನೀವದನ್ನು ನೋಡದಿರುವುದು ಅಸಾಧ್ಯ. ಇದೊಂದೇ ಅಲ್ಲ ಎಂಬುದು ನಿಮಗೆ ತಿಳಿದುಬರುತ್ತದೆ. ನಿಮ್ಮ ಸಂಪೂರ್ಣ ವಾಸದ ಕೊಠಡಿ ಕೊಳಕು ಕಲೆಗಳಿಂದ ತುಂಬಿದೆ. ಸ್ವಚ್ಛಗೊಳಿಸುವುದು ಅಗತ್ಯವಿರುವ ಫ್ಯಾನ್, ಸೋಫಾ ಕಾಣಿಸುತ್ತವೆ ಮತ್ತು ಇವು ಕೇವಲ ಗೋಚರಿಸುವ ಪ್ರದೇಶಗಳಷ್ಟೇ. ನಿಮ್ಮ ವಾಸದ ಕೋಣೆ ನೀವು ಯೋಚಿಸಿರುವುದಕ್ಕಿಂತ ಹೆಚ್ಚು ಕೊಳಕಾಗಿದೆ ಎಂದು ನಿಮಗೆ ಚಿಂತೆಯಾಗುತ್ತಿದೆಯೇ? ಅದನ್ನು ಸ್ವಚ್ಛಗೊಳಿಸುವ ಹಂತ ಹಂತದ ಪ್ರಕ್ರಿಯೆಯ ಮೂಲಕ ನಾವು ನಿಮಗೆ ಮಾರ್ಗದರ್ಶನ ನೀಡುತ್ತೇವೆ.

ಅಡಗಿರುವ ಪ್ರದೇಶಗಳನ್ನು ಗುರುತಿಸಿ

  • ಸೋಫಾಗಳ ಹಿಂದೆ ಇರುವ ಸ್ಥಳ
  • ಕಪಾಟುಗಳ ಮೇಲ್ಭಾಗ
  • ಕಾರ್ಪೆಟ್ ಕೆಳಗೆ ನೆಲದ ಮೇಲ್ಮೈ
  • ಸಂಕೀರ್ಣ ಷೋ ಪೀಸುಗಳು
  • ಫ್ಯಾನುಗಳ ರೆಕ್ಕೆಗಳು
  • ಸ್ವಿಚ್ ಬೋರ್ಡುಗಳು
  • ಕರ್ಟನ್ ರಾಡ್ಸ್
  • ಡೋರ್ ನಾಬ್ ಮತ್ತು ಹಿಡಿಕೆಗಳು

ಸ್ವಚ್ಛಗೊಳಿಸುವುದು ಹೇಗೆ

  • ಅಚ್ಚುಕಟ್ಟಾಗಿಡುವುದು​
    ನೀವು ವಸ್ತುಗಳನ್ನು ತಂದು ಸುರಿದಷ್ಟೂ ವಾಸದ ಕೊಠಡಿ ಸ್ವಚ್ಛಗೊಳಿಸುವುದು ಕಷ್ಟ. ಶುಚಿಗೊಳಿಸುವ ಕಾರ್ಯವು ಅಗತ್ಯವಿಲ್ಲದ ವಸ್ತುಗಳನ್ನು ತೆಗೆದುಹಾಕುವ ಮೂಲಕ ಪ್ರಾರಂಭವಾಗುತ್ತದೆ. ಸಂಗ್ರಹಗೊಂಡಿರುವ ಹಳೆಯ ದಿನಪತ್ರಿಕೆಗಳು, ಕರಪತ್ರಗಳು ಮತ್ತು ನಿಯತಕಾಲಿಕಗಳನ್ನು ಹೊರಹಾಕಿ.
     
  • ಧೂಳು ಜಾಡಿಸಿ ಮತ್ತು ಒರೆಸಿ​
    ಪೀಠೋಪಕರಣಗಳ ಮೇಲ್ಮೈಗಳಿಂದ ಧೂಳನ್ನು ತೆಗೆದುಹಾಕಲು ಒಣ ಬಟ್ಟೆಯನ್ನು ಬಳಸಿ. ಫ್ಯಾನ್ ರೆಕ್ಕೆಗಳು ಮತ್ತು ದೀಪದ ಛಾಯೆಗಳ ಧೂಳು ಜಾಡಿಸಿ. ನೀವು ಮೂಲೆಗಳನ್ನು ಮತ್ತು ಸಂದುಗಳನ್ನು ಅದೇ ರೀತಿ ಗುಡಿಸಬಹುದು.
     
  • ವ್ಯಾಕ್ಯೂಮ್​​
    ಒಮ್ಮೆ ಧೂಳು ಜಾಡಿಸಿದ ನಂತರ ಕಾರ್ಪೆಟ್ಟುಗಳು, ಸೋಫಾಗಳು ಮತ್ತು ಕರ್ಟನ್ನುಗಳಂಥ ಎಲ್ಲ ಉತ್ಪನ್ನಗಳನ್ನು ವ್ಯಾಕ್ಯೂಂ ಕ್ಲೀನ್ ಮಾಡಿ.
     
  • ಮೈಕ್ರೋಫೈಬರ್ ಕ್ಲಾತ್ ಬಳಸಿ ಒರೆಸಿ ಮತ್ತು ಮಾಪ್ ಮಾಡಿ​ನೀವು ಧೂಳುದುರಿಸುವುದು ಮತ್ತು ವ್ಯಾಕ್ಯುಮ್ ಮಾಡಿದ ನಂತರ ಕೊಳಕು ಸ್ವಚ್ಛಗೊಳಿಸಲು ಸರಿಯಾದ ಸಮಯ. ಸೋಪ್ ನೀರಿನಲ್ಲಿ ಮೈಕ್ರೋಫೈಬರ್ ಅನ್ನು ಅದ್ದಿ ಮತ್ತು ಫ್ಯಾನ್ ರೆಕ್ಕೆಗಳ ಮೇಲೆ ಸಂಗ್ರಹವಾಗುವ ಜಿಡ್ಡಿನ ಕೊಳೆಯನ್ನು ತೆಗೆದುಹಾಕಲು ಇದನ್ನು ಬಳಸಿ. ಕೋಸ್ಟರ್ ಅನ್ನು ಬಳಸಲು ನೀವು ಮರೆತಿದ್ದರೆ ನಿಮ್ಮ ಟೇಬಲ್ ಮೇಲ್ಮೈಗಳನ್ನು ಕಪ್ ಕಲೆಗಳಿವೆಯೇ ಪರೀಕ್ಷಿಸಿ. ಸಂಕೀರ್ಣವಾದ ವಿನ್ಯಾಸಗಳಿರುವ ಷೋ ಪೀಸುಗಳನ್ನು, ಕರ್ಟನ್ ರಾಡುಗಳನ್ನು, ಬಾಗಿಲ ಹಿಡಿಕೆಗಳನ್ನು ಮತ್ತು ಸ್ವಿಚ್ ಬೋರ್ಡುಗಳನ್ನು ಸ್ವಚ್ಛಗೊಳಿಸಲು ಮೈಕ್ರೋಫೈಬರುಗಳನ್ನು ಬಳಸಬಹುದು.
     
  • ಲಾಲ್ ಹಿಟ್ ಬಳಸಿ ಸೋಂಕು ತೆಗೆಯಿರಿ.​
    ಕೇವಲ ಗುಡಿಸುವುದು ಮತ್ತು ಒರೆಸಿದರಷ್ಟೇ ಸಾಲದು. ನಿಮ್ಮ ವಾಸದ ಕೋಣೆಯು ಕೀಟಾಣು ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಮೂಲೆಗಳಲ್ಲಿ ಅಡಗಿರುವ ಯಾವುದೇ ಜಿರಾಳೆಗಳನ್ನು ಕೊಲ್ಲಲು ಲಾಲ್ ಹಿಟ್ ಅನ್ನು ಸ್ಪ್ರೇ ಮಾಡಿ. ನೀವು ತಿಳಿದಿರುವ ಎಲ್ಲಾ ಹಂತಗಳನ್ನು ಅನುಸರಿಸಿದಲ್ಲಿ ನಿಮ್ಮ ವಾಸದ ಕೋಣೆಯು ಶುದ್ಧ ಮತ್ತು ಸೋಂಕುರಹಿತವಾಗಿರುವುದಷ್ಟೇ ಅಲ್ಲ, ತಾಜಾ ಕೂಡ ಆಗಿರುತ್ತದೆ. ನಿಮ್ಮ ವಾಸದ ಕೊಠಡಿ ಸ್ವಚ್ಛಗೊಳಿಸುವುದು ಹೇಗೆ ಎಂಬ ಬಗ್ಗೆ ನಿಮ್ಮ ಸಲಹೆಗಳಿದ್ದರೆ, ಅವುಗಳನ್ನು ಕೆಳಗೆ, ಕಾಮೆಂಟ್ ಗಳಲ್ಲಿ ಹಂಚಿಕೊಳ್ಳಿ.​

 

ಸಂಬಂಧಿತ ಉತ್ಪನ್ನಗಳನ್ನು ಅನ್ವೇಷಿಸಿ

hit-chalk
hit-anti-roach-gel
lal-hit
ಕೀಟಗಳೆದುರು ಹೋರಾಡುವ ಸರಿಯಾದ ಮಾರ್ಗ

ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!

  • ಡೆಂಗಿ
  • ಚಿಕೂನ್ಗುನ್ಯಾ
  • ಮಲೇರಿಯಾ
  • ಜಿರಳೆಗಳನ್ನು
  • ಮಾಸಿಕ ಅಡಿಗೆ ಸ್ವಚ್ಛಗೊಳಿಸುವಿಕೆ
  • ಇಲಿ