ಚಿಕುನ್ ಗುನ್ಯಾದ ಕಾಣಗಳು ಮತ್ತು ರೋಗಲಕ್ಷಣಗಳು
ವೈರಸ್ ಸೋಂಕಿನಿಂದ ಉಂಟಾಗುವ ಚಿಕುನ್ ಗುನ್ಯಾ ಸಾಮಾನ್ಯವಾಗಿ ಮುಂಗಾರಿನ ಸಮಯದಲ್ಲಿ ಕಾಣಿಸಿಕೊಳ್ಳುವ ರೋಗಗಳಲ್ಲಿ ಒಂದಾಗಿದೆ. ಚಿಕುನ್ ಗುನ್ಯಾ ವೈರಸ್ ಅನ್ನು ಹರಡುವ ಸೊಳ್ಳೆಯು ಕಡಿದಾಗ ಮಾನವರಲ್ಲಿ ಈ ರೋಗ ಕಾಣಿಸಿಕೊಳ್ಳುತ್ತದೆ. ಎಯ್ಡೀಸ್ ಇಜಿಪ್ಟಿ ಮತ್ತು ಎಯ್ಡೀಸ್ ಆಲ್ಬೋಪಿಕ್ಟಸ್ ಸೊಳ್ಳೆಗಳು ವೈರಸ್ ಅನ್ನು ಹಬ್ಬಿಸುತ್ತವೆ.
ಏಷ್ಯಾ, ಆಫ್ರಿಕಾ, ಯುರೋಪ್ ಮತ್ತು ಅಮೇರಿಕಾಗಳಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುವ ಚಿಕುನ್ ಗುನ್ಯಾ ಸೊಳ್ಳೆಯಿಂದ ಉಂಟಾಗುವ ಅನಾರೋಗ್ಯವಾಗಿದ್ದು, ಇನ್ನಷ್ಟು ಅಪಾಯಕಾರಿಯಾಗಿ ಬೆಳೆಯುತ್ತಿದೆ. ಮೇಲೆ ಉಲ್ಲೇಖಿಸಿರುವ ಪ್ರಭೇದಗಳ ಹೆಣ್ಣು ಸೊಳ್ಳೆಯಿಂದ ಕಚ್ಚಲ್ಪಟ್ಟರೆ ಚಿಕುನ್ ಗುನ್ಯಾ ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಸಾಮಾನ್ಯವಾಗಿ ಕಚ್ಚಿದ 4 ರಿಂದ 6 ದಿನಗಳವರೆಗೆ ಅನಾರೋಗ್ಯದ ಲಕ್ಷಣಗಳು ಕಾಣಿಸುವುದಿಲ್ಲ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನ ವೇಳೆಯಲ್ಲಿ ಮತ್ತು ಸಂಜೆಯ ವೇಳೆಯಲ್ಲಿ ಕಚ್ಚುತ್ತವೆ ಮತ್ತು ಒಳಾಂಗಣಗಳಿಗಿಂತ ಹೊರಾಂಗಣದಲ್ಲಿ ಕಚ್ಚುವುದು ಹೆಚ್ಚು ಎಂದು ಹೇಳಲಾಗುತ್ತದೆ. ಆದಾಗ್ಯೂ, ಅವು ಒಳಾಂಗಣದಲ್ಲಿಯೂ ಕೂಡಾ ಬೆಳೆಯಬಹುದು.
ಈ ರೋಗದ ಕೆಲವು ಸಾಮಾನ್ಯ ರೋಗಲಕ್ಷಣಗಳ ಬಗ್ಗೆ ಈಗ ನೋಡೋಣ:
ವಿಶ್ವ ಆರೋಗ್ಯ ಸಂಸ್ಥೆಯು ಈ ಕೆಳಗಿನವುಗಳನ್ನು ಈ ಅನಾರೋಗ್ಯದ ಮುಖ್ಯ ರೋಗಲಕ್ಷಣಗಳು ಎಂದು ಹೇಳಿದೆ –
1. ಹಠಾತ್ ಜ್ವರ
2. ಕೀಲು ನೋವು
3. ಸ್ನಾಯು ನೋವು
4. ತಲೆನೋವು
5. ವಾಕರಿಕೆ
6. ಆಯಾಸ
7. ದದ್ದು
ಈ ರೋಗಲಕ್ಷಣಗಳು ಸಾಮಾನ್ಯವಾಗಿದ್ದು ಕೆಲವು ಬೇರೆ ಕಾರಣಗಳಿಗಾಗಿಯೂ ಇವು ಕಂಡುಬರಬಹುದು, ಇದು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ವೈದ್ಯಕೀಯ ವೃತ್ತಿಪರರರಿಂದ ಪರೀಕ್ಷಿಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಲಾಗುತ್ತದೆ.ಇದಕ್ಕೆ ಚಿಕಿತ್ಸೆ ನೀಡದಿದ್ದಲ್ಲಿ ಇದು ಕಣ್ಣಿಗೆ ಹಾನಿ, ನರವಿಜ್ಞಾನದ ಮತ್ತು ಹೃದಯದ ತೊಂದರೆಗಳನ್ನೊಳಗೊಂಡು ಪ್ರಮುಖ ಹಾನಿಗಳನ್ನು ಉಂಟುಮಾಡಬಹುದು. ಚಿಕಿತ್ಸೆ ನೀಡದಿದ್ದಲ್ಲಿ ವೃದ್ಧ ರೋಗಿಗಳ ಇದು ಸಾವಿಗೆ ಕೂಡಾ ಇದು ಕಾರಣವಾಗಬಹುದು.
ನಿಮ್ಮ ಮನೆಯನ್ನು ಕೀಟರಹಿತಗೊಳಿಸುವುದಕ್ಕೆ ಸಲಹೆ ಸೂಚನೆಗಳು!